ಇನ್ನೊಂದು ದೆವ್ವದ ಕಥೆ
Posted date: 15 Sun, Nov 2015 – 01:58:46 PM

ಚಿತ್ರ: ಬಾ ನಾಳೆ ಬಾ ನಿರ್ದೇಶನ : ಟಿ.ಆರ್ ಅರಸು  ತಾರಾಗಣ : ಅಜಿತ್ ಕುಮಾರ್, ಶೋಭರಾಜ್ ಮತ್ತಿತರು

ರೇಟಿಂಗ್ : **

ಚಿತ್ರರಂಗದಲ್ಲಿ ಒಂದು ಮಾದರಿಯ ಚಿತ್ರ ಬಂದರೆ ಅದೇ ಮಾದರಿಯ ಅನೇಕ ಚಿತ್ರಗಳು ಗೊತ್ತೊ ಗೊತ್ತಿಲ್ಲದೆ ಸಾಲು ಸಾಲಾಗಿ ಬಂದುಬಿಡುತ್ತವೆ ಅಂತಹ ಸಾಲಿಗೆ ಮತ್ತೊಂದು ಸೇರ್ಪಡೆ "ಬಾ ನಾಳೆ ಬಾ".

ನಿರ್ದೇಶಕ ಟಿ.ಆರ್ ಅರಸು ದೆವ್ವದ ಕಥೆಗೆ ಕೊಲೆಯ ಲೇಪನ ಹಚ್ಚಿ ಚಿತ್ರವನ್ನು ತೆರೆಗೆ ತಂದಿದ್ದಾರೆ.ಚಿತ್ರವನ್ನು ಹೇಗೂ ಬೇಕಾದರೂ ತೆರೆಗೆ ತರಬಹುದು ಅದಕ್ಕೊಂದು ಪರಿಭಾಷೆಯಿಲ್ಲ.ತೆರೆಗೆ ತಂದಿದ್ದೇ ಚಿತ್ರ ಎನ್ನುವಂತಿದೆ.

ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಆದರಿಸಿ ನಿರ್ದೇಶಕರು ಚಿತ್ರವನ್ನು ತೆರೆಗೆ ತಂದಿದ್ದಾರೆ.

ಪಾಳು ಭೂಮಿ ಎಂದು ನಂಬಿದ ಜಮೀನಿಗೆ ಬಂಗಾರದಂತಹ ಬೆಲೆ ಎಂದು ಗೊತ್ತಾದ ಬಳಿಕ ಬಾಲು (ಅಜಿತ್ ಕುಮಾರ್) ಜಮೀನು ಲಪಟಾಯಿಸಲು ಮೇಲೆ ಕಣ್ಣು ಹಾಕುವ ಊರ ಗೌಡ( ಶೋಭರಾಜ್) ದೆವ್ವದ ಕಥೆ ಕಟ್ಟಿ ಈರಿನ ಮಂದಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳುತ್ತಾನೆ.ಅಮಾಯಕ ಮಂದಿ ಆತ ಹೇಳುವುದೇ ಸತ್ಯ ಎಂದು ನಂಬುತ್ತಾರೆ. ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಸಾಲು ಸಾಲು ಕೊಲೆ ಮಾಡಿಸುತ್ತಾನೆ.ಅದನ್ನು ರಹಸ್ಯವಾಗಿಡುತ್ತಾನೆ.

ವಿದೇಶದಿಂದ ವಾಪಾಸಾದ ಬಾಲುಗೆ ಊರ ಗೌಡ ಮಾಡುವ ಅನಾಚಾರಕ್ಕೆ ಪತ್ನಿ ಬಲಿಯಾಗಿರುವುದು ತಿಳಿಯಲಿದೆ. ಆತನ ವಿರುದ್ದ ಸೇಡು ತೀರಿಸಿಕೊಳ್ಳು ಮುಂದಾಗುತ್ತಾನೆ. ದೆವ್ವದ ಕಥೆ ಕಟ್ಟಿ ನಾಟಕವಾಡುವ ಗೌಡನಿಗೆ ದೆವ್ವ ಕೊನೆಗೆ ಏನೆಲ್ಲಾ ಮಾಡಲಿದೆ ಎನ್ನುವುದು ಚಿತ್ರದ ಕೌತುಕ.

ನಾಯಕ ಅಜಿತ್‌ಕುಮಾರ್ ಕಷ್ಟಪಟ್ಟಿದ್ದಾರೆ.ಮೂರು ಮಂದಿ ನಾಯಕಿಯಿದ್ದಾರೆ.ಹೇಳಿಕೊಟ್ಟಿದ್ದನ್ನು ಮಾಡಿದ್ದಾರೆ.

ಧನುಶ್ ಕ್ಯಾಮರ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed